#KadduMucchi movie starring Vijay Suriya, Megha Shree, Doddanna, Chikkanna, Honnavalli Krishna, Succhendra Prasad and others. The movie is releasing on February 22nd.

ಮಂಜುನಾಥ್ ನಿರ್ಮಾಣದ ಕದ್ದುಮುಚ್ಚಿ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಈ ಮೂಲಕವೇ ಬಹು ಕಾಲದ ನಂತರ ಹಿರಿಯ ಕಲಾವಿದರನೇಕರು ಮತ್ತೆ ಪ್ರೇಕ್ಷಕರೊಂದಿಗೆ ಮುಖಾಮುಖಿಯಾಗಿದ್ದಾರೆ. ನಿರ್ಮಾಪಕರೇ ಹೇಳೋ ಪ್ರಕಾರ ಈ ಸಿನಿಮಾ ಹಳತು ಮತ್ತು ಹೊಸತರ ಮಹಾಸಂಗಮ!

ಕದ್ದುಮುಚ್ಚಿ ಚಿತ್ರವನ್ನ ನಿರ್ದೇಶಕ ವಸಂತ್ ರಾಜಾ ಇಂಥಾ ನಾನಾ ವಿಶೇಷತೆಗಳೊಂದಿಗೆ ರೂಪಿಸಿದ್ದಾರೆ. ಹಳೇ ತಲೆಮಾರಿನ ಕಲಾವಿದರನ್ನೂ ಕೂಡಾ ಮತ್ತೆ ಕಣ್ತುಂಬಿಕೊಳ್ಳುವ ಸದಾವಕಾಶವನ್ನು ಕದ್ದುಮುಚ್ಚಿ ಚಿತ್ರ ಓಪನ್ನಾಗಿಯೇ ಪ್ರೇಕ್ಷಕರಿಗೆ ಕೊಟ್ಟಿದೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನ ಆಳಿದ್ದ ದೊಡ್ಡಣ್ಣ ಈ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಹೊನ್ನವಳ್ಳಿ ಕೃಷ್ಣ ಕೂಡಾ ಇದಕ್ಕೆ ಜೊತೆಯಾಗಿದ್ದಾರೆ. ಇವರೊಂದಿಗೆ ಸದ್ಯದ ಲೀಡ್ ಹಾಸ್ಯ ನಟ ಚಿಕ್ಕಣ್ಣನ ಸಾಥ್ ಕೂಡಾ ಇದೆ. ಈ ಮೂವರ ಪಾತ್ರಗಳೂ ಕೂಡಾ ಕಥೆಯೊಂದಿಗೇ ಹೊಸೆದುಕೊಂಡಿದೆಯಂತೆ. ಈವರೆಗೂ ನಾನಾ ಹೀರೋಗಳ ಜೊತೆ ಕಾಮಿಡಿ ಕಮಾಲ್ ಸೃಷ್ಟಿಸಿದ್ದ ಚಿಕ್ಕಣ್ಣ ಇಲ್ಲಿ ದೊಡ್ಡಣ್ಣರಂಥ ಹಿರಿಯ ಕಲಾವಿದರಿಗೆ ಜೊತೆಯಾಗಿದ್ದಾರೆ.

ಈ ಹಿರಿ ಕಿರಿಯರ ಜುಗಲ್ಬಂದಿ ಕೂಡಾ ಕದ್ದುಮುಚ್ಚಿ ಸಿನಿಮಾದ ಮುಖ್ಯ ಆಕರ್ಷಣೆ ಎನ್ನಲಡ್ಡಿಯಿಲ್ಲ. ಅದರ ನಿಜವಾದ ಸೊಗಸು ಅನಾವರಣಗೊಳ್ಳೋ ಕಾಲ ಹತ್ತಿರದಲ್ಲಿದೆ.

For latest updates on film news subscribe our channel.

Subscribe on YouTube: www.youtube.com/publicmusictv
Like us @ https://www.facebook.com/publicmusictv
Follow us @ https://twitter.com/publicmusictv